ಸಿಇಟಿ-2025ಕ್ಕೆ ನೊಂದಣಿ ಹಾಗು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 16 ಮತ್ತು 17 ರಂದು ನಡೆಸುವುದಾಗಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಅದರಂತೆ, ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಆನ್ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನಾಂಕ ಎಂದಿತ್ತು.ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲಾಗುವ ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಆನ್ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು 24-02-2025 ರ ರಾತ್ರಿ 11.59 ರವರೆಗೆ ಹಾಗು 25-02-2025 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ.ವಿಶೇಷ ಸೂಚನೆ: “ಈಗಾಗಲೇ ಅರ್ಜಿ ಸಲ್ಲಿಸಿರುವವರು ಎಲ್ಲಾ ಮಾಹಿತಿ ಸರಿಯಾಗಿ ತುಂಬಿರುವ ಬಗ್ಗೆ ಪರಿಶೀಲಿಸಿಕೊಳ್ಳಿ, ತಪ್ಪಿದ್ದರೆ ಮತ್ತೊಮ್ಮೆ Login ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂತಿಮವಾಗಿ Submit ಮಾಡುವ ಅರ್ಜಿ ಸರ್ವರ್ನನಲ್ಲಿ Save ಆಗುತ್ತದೆ”.Date extended for registration and to apply online for CET-2025
ಈ ಟ್ರ್ಯಾಕ್ಟರ್ ಹೇಸರು Swaraj 735 FE ಟ್ರ್ಯಾಕ್ಟರ್ ನಾ ಮಾಡಲ್ 2002 ಈ ಟ್ರ್ಯಾಕ್ಟರ್ 3 ನೆ ಓನರ್ ಯಾರು ತಗೋಳ್ತೀರಾ ಅವರು 4ನೇ ಓನರ್ ಆಗುತ್ತಾರೆ ಟ್ರ್ಯಾಕ್ಟರ್ ಇರುವ ಅಡ್ರೆಸ್ ಬಿಜಾಪುರ್ ಜಿಲ್ಲೆಯ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಇರುತ್ತದೆ ಟ್ರ್ಯಾಕ್ಟರ್ ನಾಕ್ ಬೆಲೆ ಬಂದು ಓನರ್ ಹೇಳ್ತಾ ಇರೋದು 1,20,000 ಫೈನಲ್ ಆಗಿ 90,000 ಕ್ಕೆ ಕೊಡುತ್ತೇವೆ ಎಂದು ಓನರ್ ಹೇಳಿದ್ದಾರೆ ಇನ್ನು ಈ ಒಂದು ಟ್ಯಾಕ್ಟರ್ ನ ಡಾಕ್ಯುಮೆಂಟ್ಸ್ ವಿಚಾರಕ್ಕೆ ಬಂದರೆ ಡಾಕ್ಯುಮೆಂಟ್ಸ್ ಗಳು ಇವೆ ಆದರೆ ಎಸ್ಸಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ಇರುವುದಿಲ್ಲ ಇನ್ನು ಟ್ರ್ಯಾಕ್ಟರ್ ನ ರಾಯರು ಬಂದು 30% ವರೆಗೆ ಇರುತ್ತೇವೆ ಇನ್ನು ಗಾಡಿ ಬಂದು 41HP ಆಸ್ಪವರ್ ಟ್ರ್ಯಾಕ್ಟರ್ ಆಗಿದೆ ಇನ್ ಟ್ಯಾಕ್ಟರ್ ಒಂದು ಇಂಜಿನ್ ಮಾತ್ರ ಮಾರಾಟಕ್ಕೆ ಇರುತ್ತೇನೆ ಗಾಡಿ ಜೊತೆಗೆ ಯಾವುದೇ ಅಟ್ಯಾಚ್ಮೆಂಟ್ ಇರುವುದಿಲ್ಲ. ಗಾಡಿ ಓನರ್ ನಂಬರ್ 8722150038
👆ಪರಾಗಸ್ಪರ್ಶದ ಪ್ರಾಮುಖ್ಯತೆ ಸಸ್ಯಗಳ ಸಂತಾನೋತ್ಪತ್ತಿಗೆ ಪರಾಗಸ್ಪರ್ಶವು ನಿರ್ಣಾಯಕವಾಗಿದೆ ಮತ್ತು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಭೂಮಿಯ ಮೇಲಿನ ಜೀವನವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಾಗಸ್ಪರ್ಶದ ಕೆಲವು ಪ್ರಮುಖ ಪ್ರಾಮುಖ್ಯತೆಗಳು ಇಲ್ಲಿವೆ:
# ಪರಿಸರ ಪ್ರಾಮುಖ್ಯತೆ 1.
*ಬೀಜ ಮತ್ತು ಹಣ್ಣಿನ ಉತ್ಪಾದನೆ*: ಪರಾಗಸ್ಪರ್ಶವು ಬೀಜಗಳು ಮತ್ತು ಹಣ್ಣುಗಳನ್ನು ಉತ್ಪಾದಿಸಲು ಸಸ್ಯಗಳನ್ನು ಶಕ್ತಗೊಳಿಸುತ್ತದೆ, ಸಸ್ಯ ಜಾತಿಗಳ ಮುಂದುವರಿಕೆಯನ್ನು ಖಚಿತಪಡಿಸುತ್ತದೆ.
2. *ಆಹಾರ ಭದ್ರತೆ*: ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀಜಗಳು ಸೇರಿದಂತೆ ಅನೇಕ ಬೆಳೆಗಳ ಉತ್ಪಾದನೆಗೆ ಪರಾಗಸ್ಪರ್ಶ ಅತ್ಯಗತ್ಯ.
3. *ಪರಿಸರ ವ್ಯವಸ್ಥೆಯ ವೈವಿಧ್ಯತೆ*: ಪರಾಗಸ್ಪರ್ಶವು ವ್ಯಾಪಕ ಶ್ರೇಣಿಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಬೆಂಬಲಿಸುವ ಮೂಲಕ ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನು ನಿರ್ವಹಿಸುತ್ತದೆ.
4. *ಜೀವವೈವಿಧ್ಯದ ಹಾಟ್ಸ್ಪಾಟ್ಗಳು*: ಪರಾಗಸ್ಪರ್ಶವು ಜೀವವೈವಿಧ್ಯದ ಹಾಟ್ಸ್ಪಾಟ್ಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಇದು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವಕ್ಕೆ ನಿರ್ಣಾಯಕವಾಗಿದೆ.
# ಪರಿಸರ ಪ್ರಾಮುಖ್ಯತೆ 1. *ಹವಾಮಾನ ನಿಯಂತ್ರಣ*: ಪರಾಗಸ್ಪರ್ಶವು ಕಾರ್ಬನ್ ಸೀಕ್ವೆಸ್ಟ್ರೇಶನ್ ಮತ್ತು ಆಮ್ಲಜನಕ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹವಾಮಾನ ನಿಯಂತ್ರಣದ ಮೇಲೆ ಪ್ರಭಾವ ಬೀರುತ್ತದೆ. 2. *ಮಣ್ಣಿನ ಆರೋಗ್ಯ*: ಪರಾಗಸ್ಪರ್ಶವು ಪೋಷಕಾಂಶಗಳ ಸೈಕ್ಲಿಂಗ್ ಮತ್ತು ಮಣ್ಣಿನ ಫಲವತ್ತತೆಯನ್ನು ಸುಲಭಗೊಳಿಸುವ ಮೂಲಕ ಮಣ್ಣಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. 3. *ನೀರಿನ ಚಕ್ರ*: ಪರಾಗಸ್ಪರ್ಶವು ಬಾಷ್ಪೀಕರಣ ಮತ್ತು ನೀರಿನ ಲಭ್ಯತೆಯ ಮೇಲೆ ಪ್ರಭಾವ ಬೀರುವ ಮೂಲಕ ಜಲಚಕ್ರದ ಮೇಲೆ ಪರಿಣಾಮ ಬೀರುತ್ತದೆ. 4. *ಸವೆತ ತಡೆಗಟ್ಟುವಿಕೆ*: ಪರಾಗಸ್ಪರ್ಶದಿಂದ ಬೆಂಬಲಿತವಾದ ಸಸ್ಯವರ್ಗವು ಮಣ್ಣಿನ ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ.
# ಆರ್ಥಿಕ ಪ್ರಾಮುಖ್ಯತೆ 1. *ಕೃಷಿ ಉತ್ಪಾದಕತೆ*: ಜಾಗತಿಕ ಆಹಾರ ಭದ್ರತೆಗೆ ಕೊಡುಗೆ ನೀಡುವ ಕೃಷಿ ಉತ್ಪಾದಕತೆಗೆ ಪರಾಗಸ್ಪರ್ಶ ಅತ್ಯಗತ್ಯ. 2. *ಆರ್ಥಿಕ ಪ್ರಯೋಜನಗಳು*: ಪರಾಗಸ್ಪರ್ಶವು ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ಉಂಟುಮಾಡುತ್ತದೆ, ವಾರ್ಷಿಕವಾಗಿ $200 ಶತಕೋಟಿ ಎಂದು ಅಂದಾಜಿಸಲಾಗಿದೆ. 3. *ಉದ್ಯೋಗ ಸೃಷ್ಟಿ*: ಪರಾಗಸ್ಪರ್ಶವು ಕೃಷಿ, ಅರಣ್ಯ ಮತ್ತು ಸಂಬಂಧಿತ ಉದ್ಯಮಗಳಲ್ಲಿ ಜೀವನೋಪಾಯ ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುತ್ತದೆ.
# ಸಾಮಾಜಿಕ ಪ್ರಾಮುಖ್ಯತೆ 1. *ಆಹಾರ ಸಾರ್ವಭೌಮತ್ವ*: ಪರಾಗಸ್ಪರ್ಶವು ಸ್ಥಳೀಯ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸುವ ಮೂಲಕ ಆಹಾರದ ಸಾರ್ವಭೌಮತ್ವವನ್ನು ಖಚಿತಪಡಿಸುತ್ತದೆ. 2. *ಸಾಂಸ್ಕೃತಿಕ ಮಹತ್ವ*: ಪರಾಗಸ್ಪರ್ಶವು ಸಾಂಸ್ಕೃತಿಕ ಪರಂಪರೆ ಮತ್ತು ಸಸ್ಯ ಬಳಕೆಗೆ ಸಂಬಂಧಿಸಿದ ಸಾಂಪ್ರದಾಯಿಕ ಆಚರಣೆಗಳನ್ನು ನಿರ್ವಹಿಸುತ್ತದೆ. 3. *ಮಾನವ ಯೋಗಕ್ಷೇಮ*: ಪರಾಗಸ್ಪರ್ಶವು ಮಾನಸಿಕ ಆರೋಗ್ಯ, ಮನರಂಜನೆ ಮತ್ತು ಪ್ರವಾಸೋದ್ಯಮವನ್ನು ಬೆಂಬಲಿಸುವ ಮೂಲಕ ಮಾನವ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.
# ಪರಾಗಸ್ಪರ್ಶಕ್ಕೆ ಬೆದರಿಕೆಗಳು 1. *ಆವಾಸಸ್ಥಾನದ ನಷ್ಟ*: ಆವಾಸಸ್ಥಾನ ನಾಶ ಮತ್ತು ವಿಘಟನೆಯು ಪರಾಗಸ್ಪರ್ಶಕ ಜನಸಂಖ್ಯೆಯನ್ನು ಬೆದರಿಸುತ್ತದೆ. 2. *ಹವಾಮಾನ ಬದಲಾವಣೆ*: ಹವಾಮಾನ ಬದಲಾವಣೆಯು ಪರಾಗಸ್ಪರ್ಶಕ-ಸಸ್ಯ ಸಂವಹನ ಮತ್ತು ಸಿಂಕ್ರೊನಿಯನ್ನು ಅಡ್ಡಿಪಡಿಸುತ್ತದೆ. 3. *ಕೀಟನಾಶಕ ಬಳಕೆ*: ಕೀಟನಾಶಕ ದುರುಪಯೋಗವು ಪರಾಗಸ್ಪರ್ಶಕಗಳಿಗೆ ಹಾನಿ ಮಾಡುತ್ತದೆ ಮತ್ತು ಪರಾಗಸ್ಪರ್ಶ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. 4. *ಪರಾಗಸ್ಪರ್ಶಕ ಅವನತಿ*: ಜೇನುನೊಣಗಳು ಮತ್ತು ಚಿಟ್ಟೆಗಳಂತಹ ಪರಾಗಸ್ಪರ್ಶಕ ಜನಸಂಖ್ಯೆಯಲ್ಲಿನ ಕುಸಿತವು ಪರಾಗಸ್ಪರ್ಶವನ್ನು ರಾಜಿ ಮಾಡುತ್ತದೆ. ಈ ಬೆದರಿಕೆಗಳನ್ನು ತಗ್ಗಿಸಲು, ಸಮರ್ಥನೀಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ,
ಉದಾಹರಣೆಗೆ: 1. ಪರಾಗಸ್ಪರ್ಶಕ-ಸ್ನೇಹಿ ಜಾತಿಗಳನ್ನು ನೆಡುವುದು 2. ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವುದು 3. ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು 4. ಸುಸ್ಥಿರ ಕೃಷಿಯನ್ನು ಬೆಂಬಲಿಸುವುದು 5. ಪರಾಗಸ್ಪರ್ಶಕ ಸಂರಕ್ಷಣೆಯ ಪ್ರಯತ್ನಗಳನ್ನು ಉತ್ತೇಜಿಸುವುದು
👆ಸುಸ್ಥಿರ ಕೃಷಿಗಾಗಿ ಪೋಷಕಾಂಶಗಳ ಬಳಕೆಯ ದಕ್ಷತೆಯ (NUE) ಪ್ರಾಮುಖ್ಯತೆ
ಕೃಷಿಯಲ್ಲಿ, ದಕ್ಷತೆಯು ಪ್ರಮುಖವಾಗಿದೆ – ಕಾರ್ಯಾಚರಣೆಗಳಲ್ಲಿ ಮಾತ್ರವಲ್ಲದೆ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರಲ್ಲಿಯೂ ಸಹ. ಪೋಷಕಾಂಶಗಳ ಬಳಕೆಯ ದಕ್ಷತೆ (NUE) ರಸಗೊಬ್ಬರಗಳ ಮೂಲಕ ಅನ್ವಯಿಸಲಾದ ಪೋಷಕಾಂಶಗಳನ್ನು ಬೆಳೆಗಳು ಎಷ್ಟು ಚೆನ್ನಾಗಿ ಹೀರಿಕೊಳ್ಳುತ್ತವೆ ಎಂಬುದನ್ನು ಸೂಚಿಸುತ್ತದೆ. NUE ಅನ್ನು ಉತ್ತಮಗೊಳಿಸುವುದರಿಂದ ರೈತರಿಗೆ ಕಡಿಮೆ ಒಳಹರಿವಿನೊಂದಿಗೆ ಹೆಚ್ಚಿನ ಇಳುವರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಲಾಭದಾಯಕತೆಯನ್ನು ಸುಧಾರಿಸುತ್ತದೆ.
💡 NUE ಏಕೆ ಮುಖ್ಯವಾಗುತ್ತದೆ? 🔸 ಅತಿಯಾದ ರಸಗೊಬ್ಬರ ಬಳಕೆ ಇಲ್ಲದೆ ಬೆಳೆ ಗುಣಮಟ್ಟ ಮತ್ತು ಇಳುವರಿಯನ್ನು ಸುಧಾರಿಸುತ್ತದೆ 🔸 ಪೋಷಕಾಂಶಗಳ ಸೋರಿಕೆಯಂತಹ ಪರಿಸರ ಅಪಾಯಗಳನ್ನು ಕಡಿಮೆ ಮಾಡುತ್ತದೆ 🔸 ಅತಿ-ಅಪ್ಲಿಕೇಶನ್ ತಪ್ಪಿಸುವ ಮೂಲಕ ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ
🔍 ರೈತರು NUE ಅನ್ನು ಹೇಗೆ ಸುಧಾರಿಸಬಹುದು? • ನಿಮ್ಮ ಬೆಳೆಯ ಅಗತ್ಯಗಳಿಗೆ ನಿರ್ದಿಷ್ಟವಾದ ಸರಿಯಾದ ರಸಗೊಬ್ಬರ ಮೂಲವನ್ನು ಅನ್ವಯಿಸಿ • ಅತಿ-ಗೊಬ್ಬರ ಅಥವಾ ಕಡಿಮೆ-ಗೊಬ್ಬರವನ್ನು ತಪ್ಪಿಸಲು ಸರಿಯಾದ ದರವನ್ನು ಬಳಸಿ • ಸೂಕ್ತವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸರಿಯಾದ ಸಮಯದಲ್ಲಿ ಫಲವತ್ತಾಗಿಸಿ • ರಸಗೊಬ್ಬರಗಳನ್ನು ಸರಿಯಾದ ಸ್ಥಳದಲ್ಲಿ ಇರಿಸಿ – ಸಮರ್ಥ ಹೀರಿಕೊಳ್ಳುವಿಕೆಗಾಗಿ ಬೆಳೆ ಬೇರುಗಳಿಗೆ ಹತ್ತಿರ
ಮರಳು ಮಣ್ಣಿನ ಕಣ ಕಣಗಳ ನಡುವೆ ಸ್ವಲ್ಪ ದೊಡ್ಡದು ಎನಿಸುವಂತಹ ರಂಧ್ರಗಳಿರುತ್ತವೆ. ಈ ರಂಧ್ರಗಳ ಮೂಲಕವೇ ನೀರು ಸುಲಭವಾಗಿ ಮಣ್ಣೊಳಗೆ ಇಳಿಯುತ್ತದೆ ಹಾಗೂ ಅಕ್ಕಪಕ್ಕ ಸರಾಗವಾಗಿ ಹರಿದಾಡುತ್ತದೆ.
ಆದರೆ ಮರಳು ಮಣ್ಣು ತನ್ನಲ್ಲಿರುವ ತೇವಾಂಶವನ್ನು / ನೀರನ್ನು ಕೆಲಕಾಲ ಹಿಡಿದಿಟ್ಟು ತನ್ನಲ್ಲಿ ಬೆಳೆಯುವ ಗಿಡಗಳಿಗೆ ಅಗತ್ಯ ಸಮಯದಲ್ಲಿ ನೀರು ಪೂರೈಸುವ ಸಾಮರ್ಥ್ಯ ಹೊಂದಿಲ್ಲ.ಜೇಡಿ ಮಣ್ಣಿನ ಕಣಕಣಗಳ ನಡುವೆಯೂ ಸಹ ರಂಧ್ರಗಳಿರುತ್ತವೆಯಾದರೂ, ಅವುಗಳ ಗಾತ್ರ ಬಹಳ ಚಿಕ್ಕದು. ಇದರಿಂದ ನೀರು ಸುಲಭವಾಗಿ ಮಣ್ಣೊಳಗೆ ಇಳಿಯಲಾಗದು. ನೀರು ಇಂಗಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗೆಯೇ ನೀರು ಅಕ್ಕಪಕ್ಕ ಹರಿದಾಡುವುದಕ್ಕೂ ಸಹ ಸ್ವಲ್ಪ ಸಮಯ ಬೇಕು.ನಮ್ಮಲ್ಲಿನ ಮಣ್ಣಗಳ ನಮೂನೆಯಲ್ಲಿ (soil texture).ಮರಳು ಮತ್ತು ಜೇಡಿ ಅಂಶಗಳ ಜೊತೆಗೆ ಗೋಡು ಮಣ್ಣಿನ ಪ್ರಮಾಣವೂ ಇರಬೇಕು.
ಈ ಮೂರು ಆಂಶಗಳಿರುವ ಮಣ್ಣಿದ್ದಲ್ಲಿ, ಸಮತೋಲನೆ ಇದೆಯೆಂದೇ ಅರ್ಥ.ಒಂದು ವೇಳೆ ನಮ್ಮಲ್ಲಿನ ಮಣ್ಣುಗಳಲ್ಲಿ ಮರಳು ಅಥವಾ ಗೋಡು ಅಥವಾ ಜೇಡಿ ಅಂಶಗಳ ಕೊರತೆಯಿದ್ದಲ್ಲಿ ಹಾಗೂ ಅವುಗಳು ಸಮತೋಲನೆಯಿಂದಿರಲು ಮಣ್ಣಿಗೆ ಸಾವಯವ ಅಂಶ ಬೆರೆಸುವುದು ನಮಗಿರುವ ಏಕೈಕ ಪರಿಹಾರ.ಮಣ್ಣಿಗೆ ಸಾವಯವ ಗೊಬ್ಬರವನ್ನು ಸೇರಿಸಿದಾಗ, ಮಣ್ಣುಜೀವಿಗಳ ಸಹಕಾರದಿಂದ ಮಣ್ಣಲ್ಲಿನ ಮರಳು – ಗೋಡು – ಜೇಡಿ ಅಂಶಗಳು ಪರಸ್ಪರ ಬೆರೆಯುತ್ತಾ ಸಮತೋಲನೆ ಯಲ್ಲಿರುತ್ತವೆ.
ಬೆರೆತಿರುವ ಮಣ್ಣು ಕಣಕಣಗಳ ನಡುವಿನ ರಂಧ್ರಗಳ ಮೂಲಕ ಮಣ್ಣು ಸರಾಗವಾಗಿ ಉಸಿರಾಡುತ್ತದೆ.ಖಟಾವಿನ ಸಮಯದಲ್ಲಿ ಗಿಡಗಳ ಬೇರುಗಳನ್ನು ಮಣ್ಣಲ್ಲೇ ಇರುವಂತೆ ಮಾಡಿದಾಗ, ಆ ಬೇರುಗಳು ಮಣ್ಣೊಳಗೆಲ್ಲಾ ಹರಡಿ, ಒಂದು ಬಗೆಯ ಅಂಟನ್ನು (sticky ‘glue’) ವಿಸರ್ಜಿಸಿ, ಅ ಆಂಟು ಮಣ್ಣು ಕಣಕಣಗಳು ಬೆರೆಯುವಂತೆ ಮಾಡುತ್ತವೆ.ಇನ್ನು ಬೇರು ಹರಡಿದ ಕಡೆಯೆಲ್ಲಾ ರಂಧ್ರಗಳು ಸೃಷ್ಟಿಯಾಗುತ್ತವೆ. ಕೊನೆಗೆ ಈ ಬೇರೂ ಸಹ ಮಣ್ಣಲ್ಲಿ ಮನೆಮಾಡಿಕೊಂಡಿರುವ ಮಣ್ಣು ಜೀವಾಣುಗಳಿಗೆ ಉತ್ತಮ ಆಹಾರವಾಗುತ್ತದೆ.ಉಳುಮೆ ಮಾಡುವುದು ಕಡಿಮೆಯಾದಷ್ಟೂ ಮಣ್ಣಿನ ರಚನೆ ಸುಧಾರಿಸುತ್ತದೆ. ಮಣ್ಣಲ್ಲಿನ ಜೀವಿಗಳು ಆತಂಕವಿಲ್ಲದೇ ಬದುಕುಳಿಯುವ ವಾತಾವರಣ ನಿರ್ಮಾಣವಾಗುತ್ತದೆ.ಅಂತಹ ಮಣ್ಣುಗಳು ಕ್ರಮೇಣ ಸಜೀವಿ ಮಣ್ಣುಗಳಾಗುತ್ತವೆ. ಸಜೀವಿ ಮಣ್ಣುಗಳು ಫಲವತ್ತಾಗಿರುತ್ತವೆ. ಫಲವತ್ತು ಮಣ್ಣಲ್ಲಿ ಬೆಳೆಯುವ ಬೆಳೆಗಳು ಇಳುವರಿಯಲ್ಲೂ ಗುಣಮಟ್ಟದಲ್ಲೂ ಹೆಚ್ಚೇ. ಅಲ್ಲವೇ . .
👆ನಮ್ಮ ಹೊಲದ ಮಣ್ಣು ಗಟ್ಟಿಯಾದಲ್ಲಿ (compacted) ಏನೇನು ಅವಘಢಗಳು ನಡೆಯುತ್ತವೆ ನೋಡಿ.
ಕೆಲವು ಗಿಡದ ಬೇರುಗಳು ಮಣ್ಣೊಳಗೆ ಇಳಿಯುತ್ತಾ ಕ್ರಮೇಣ ಅಡ್ಡಡ್ಡ ಹರಡಿಕೊಳ್ಳುತ್ತವೆ. ಮಣ್ಣು ಗಟ್ಟಿಯಾದಾಗ (compaction) ಈ ರೀತಿ ಆಗುತ್ತದೆ. ಹೀಗೆ ಅಡ್ಡಡ್ಡ ಹರಡುವ ಬೇರುಗಳಿರುವ ಗಿಡಕ್ಕೆ ಪೋಷಕಾಂಶ ಹಾಗೂ ತೇವಾಂಶ ಸಿಗುವುದು ಸ್ವಲ್ಪ ಕಷ್ಟವೇ. ಇವೆರಡೂ ಸಕಾಲದಲ್ಲಿ ಸಿಗದಿದ್ದಲ್ಲಿ ಗಿಡಗಳು ಬಳಲುತ್ತವೆ – ದುರ್ಬಲಗೊಳ್ಳುತ್ತವೆ. ಶಕ್ತಿ ಕಳೆದುಕೊಳ್ಳುತ್ತವೆ.
ದುರ್ಬಲಗೊಂಡಿರುವ ಗಿಡಗಳು ಕಡೆಯ ಪ್ರಯತ್ನವಾಗಿ ತನ್ನ ಉಳಿವಿಗಾಗಿ ಅಗತ್ಯವಾದ ತೇವ ಮತ್ತು ಪೋಷಕಾಂಶಕ್ಕಾಗಿ ಅಕ್ಕಪಕ್ಕದ ಗಿಡಗಳೊಂದಿಗೆ ಸ್ಪರ್ಧಿಸುತ್ತವೆ. ಬಲಿಷ್ಠ ಗಿಡ ಬದುಕುತ್ತದೆ. ದುರ್ಬಲ ಗಿಡ ಒಣಗುತ್ತದೆ.
ಇಂತಹ ಒಣಗಿದ ಶಕ್ತಿಹೀನ ಗಿಡಗಳನ್ನು ಬೆಳೆ ಪೀಡೆಗಳು ಸುಲಭವಾಗಿ ಆಕ್ರಮಿಸುತ್ತವೆ. ಪೀಡೆಗಳೊಂದಿಗೆ ಹೋರಾಡುವ ಕಸುವಿಲ್ಲದ ಗಿಡಗಳು ಪೀಡೆಗಳಿಗೆ ಬಲಿಯಾಗುತ್ತವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಟ್ಟಿಯಾಗಿರುವ ಮಣ್ಣಲ್ಲಿ ಕೆಲವು ಬಗೆಯ ಕಳೆಗಿಡಗಳು ಬೆಳೆಯುತ್ತವೆ. ಅವುಗಳ ಬೇರುಗಳನ್ನು ಗಮನಿಸಿದಾಗ, ಆ ಕಳೆ ಗಿಡದ ಬೇರುಗಳು ಗಟ್ಟಿ ಪದರವಿರುವ ಮಣ್ಣನ್ನು ಭೇದಿಸಿ ಆಳವಾಗಿಳಿಯುತ್ತವೆ. ಬೇರುಗಳ ಮೂಲಕ ತಾನಿಳಿದ ಮಾರ್ಗದುದ್ದಕ್ಕೂ ಗಾಳಿಯನ್ನೂ ಸಹ ಕೊಂಡೊಯ್ಯುತ್ತದೆ.
ಮಳೆಯಾದಲ್ಲಿ, ಮಳೆನೀರೂ ಕೂಡಾ ಬೇರಿನಾಳಕ್ಕೆ ಹರಿದು ಮಣ್ಣನ್ನು ತಂಪಾಗಿಸುತ್ತದೆ. ತಂಪಿರುವ ಮಣ್ಣಲ್ಲಿ ಜೀವಿಗಣಗಳು ಖುಷಿಯಾಗಿ ಮಣ್ಣಿನಾದ್ಯಂತ ಓಡಾಡಿಕೊಂಡಿರುತ್ತವೆ. ಹಾಗೆಯೇ ಮಣ್ಣಲ್ಲಿನ ಖನಿಜಾಂಶವನ್ನು ಮೇಲ್ಭಾಗಕ್ಕೆ ರವಾನಿಸುತ್ತವೆ.
👆ಒಂದೇ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚುವ ಸಮಸ್ಯೆಗಳ ಬಗ್ಗೆ ತಿಳಿದಿದೆಯೇ?
ರೈತರು ತಮ್ಮ ಕೃಷಿ ಜಮೀನಿನಲ್ಲಿ, ಪ್ರತೀ ವರ್ಷ ಒಂದೇ ರೀತಿಯ ಅಥವ ಒಂದೇ ಜಾತಿಯ ಬೆಳೆಗಳನ್ನು ಬೆಳೆಯುವುದರಿಂದ ತಮ್ಮ ಬೆಳೆಗಳಿಗೆ ಬರುವ ಕೀಟ ಹಾಗೂ ರೋಗದ ಸಮಸ್ಯೆ ಹೆಚ್ಚಾಗುವುದು ಮತ್ತು ತಮ್ಮ ಜಮೀನಿನ ಮಣ್ಣಿನ ಸಾರಾಂಶ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬೆಳೆ ಪರಿವರ್ತನೆ ಮಾಡುವುದರಿಂದಾಗುವ ಲಾಭಗಳು: ✓ ಮಣ್ಣಿನ ಆರೋಗ್ಯ ಸುಧಾರಣೆ: ನಿರ್ದಿಷ್ಟ ಪೋಷಕಾಂಶಗಳ ಸವಕಳಿಯನ್ನು ತಡೆಗಟ್ಟುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಬೆಳೆ ಸರದಿ ಅಥವಾ ಬೆಳೆ ಪರಿವರ್ತನೆ ಸಹಾಯ ಮಾಡುತ್ತದೆ. ವಿಭಿನ್ನ ಬೆಳೆಗಳು ವಿಭಿನ್ನ ಪೋಷಕಾಂಶದ ಅವಶ್ಯಕತೆಗಳು ಮತ್ತು ಬೇರಿನ ರಚನೆಗಳನ್ನು ಹೊಂದಿವೆ, ಇದು ಪೋಷಕಾಂಶದ ಅಸಮತೋಲನದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳ ವಿತರಣೆಯನ್ನು ಖಚಿತಪಡಿಸುತ್ತದೆ.
✓ ರೋಗ ಮತ್ತು ಕೀಟ ನಿರ್ವಹಣೆ: ತಿರುಗುವ ಬೆಳೆಗಳು ನಿರ್ದಿಷ್ಟ ಬೆಳೆಗಳನ್ನು ಗುರಿಯಾಗಿಸುವ ಕೀಟಗಳು ಮತ್ತು ರೋಗಕಾರಕಗಳ ಜೀವನ ಚಕ್ರಗಳನ್ನು ಅಡ್ಡಿಪಡಿಸುತ್ತದೆ. ಇದು ಮಣ್ಣಿನಲ್ಲಿ ಕೀಟ ಮತ್ತು ರೋಗಗಳ ಸಂಗ್ರಹವನ್ನು ಕಡಿಮೆ ಮಾಡುತ್ತದೆ, ರಾಸಾಯನಿಕ ಕೀಟನಾಶಕಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಸಸ್ಯಗಳನ್ನು ಉತ್ತೇಜಿಸುತ್ತದೆ.
✓ ಕಳೆ ನಿಗ್ರಹ: ಬೆಳೆ ತಿರುಗುವಿಕೆಯು ನೈಸರ್ಗಿಕವಾಗಿ ಕಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಸಸ್ಯನಾಶಕಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.
✓ ಪೋಷಕಾಂಶಗಳ ಲಭ್ಯತೆ: ದ್ವಿದಳ ಧಾನ್ಯಗಳಂತಹ ಕೆಲವು ಬೆಳೆಗಳು (ಉದಾಹರಣೆಗೆ, ಸೋಯಾಬೀನ್, ಬಟಾಣಿ ಮತ್ತು ಬೀನ್ಸ್), ಸಾರಜನಕ- ಫಿಕ್ಸಿಂಗ್ ಬ್ಯಾಕ್ಟಿರಿಯಾದೊಂದಿಗೆ ಸಹಜೀವನದ ಸಂಬಂಧಗಳ ಮೂಲಕ ವಾತಾವರಣದ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಬೆಳೆಗಳು ಮಣ್ಣಿನ ಸಾರಜನಕ ಮಟ್ಟವನ್ನು ಹೆಚ್ಚಿಸಬಹುದು, ನಂತರದ ಬೆಳೆಗಳಿಗೂ ಇದರ ಪ್ರಯೋಜನ ದೊರೆಯುತ್ತದೆ.
✓ ಬೆಳೆ ಇಳುವರಿ ವೃದ್ಧಿ: ಬೆಳೆ ಪರಿವರ್ತನೆಯಿಂದ ಇಳುವರಿ ಹೆಚ್ಚಳವಾಗುತ್ತದೆ. ಆರೋಗ್ಯಕರ ಮಣ್ಣು, ಕಡಿಮೆಯಾದ ರೋಗ ಮತ್ತು ಕೀಟಗಳ ಬಾಧೆ ಮತ್ತು ಅತ್ಯುತ್ತಮವಾದ ಪೋಷಕಾಂಶಗಳ ಲಭ್ಯತೆ ಇವೆಲ್ಲವೂ ಸುಧಾರಿತ ಬೆಳೆ ಉತ್ಪಾದಕತೆಗೆ ಕೊಡುಗೆ ನೀಡುತ್ತವೆ.
ರೈತರು ಬೆಳೆ ಪರಿವರ್ತನೆ ಪದ್ಧತಿ ಹಾಗೂ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ತಮ್ಮ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುವುದರ ಜೊತೆಯಲ್ಲಿ ಬೆಳೆಗೆ ಬರುವ ಕೀಟ ಮತ್ತು ರೋಗದ ಸಮಸ್ಯೆಯನ್ನು ಕಡಿಮೆ ಮಾಡಿ ಮಣ್ಣಿನ ಭೌತಿಕ ಗುಣವನ್ನು ಆರೋಗ್ಯವಾಗಿ ದೀರ್ಘಕಾಲ ಕಾಪಾಡಬಹುದು.
ಇಲಾಖೆಯ ಮೂಲಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ ಮಾಡಲಾಗಿದೆ ಎನ್ನುವ ಮಾಹಿತಿ ಇದ್ದು ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದ್ದು ಪ್ರತಿ ತಿಂಗಳು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ರದ್ದಾದ ಪಡಿತರ ಚೀಟಿದಾರರ ಪಟ್ಟಿಯನ್ನು ಹಾಕಲಾಗುತ್ತದೆ ಅನರ್ಹರು ರೇಶನ್ ಕಾರ್ಡ ಪಡೆದಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಇಲಾಖೆ ಅಧಿಕಾರಿಗಳು ಮಾರ್ಗಸೂಚಿ ಪ್ರಕಾರ ರೇಶನ್ ಕಾರ್ಡ ಪಡೆಯಲು ಅರ್ಹರಿಲ್ಲದೇ ಇರುವ ದೊಡ್ಡ ಸಂಖ್ಯೆ ಫಲಾನುಭವಿಗಳನ್ನು ಗುರುತಿಸಿದ್ದಾರೆ ಎಂದು ಇದರ ಅಂಕಿ-ಅಂಶದ ವಿವರವನ್ನು ಹಂಚಿಕೊಂಡಿದ್ದಾರೆ.
Ineligible ration card- 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ: ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ರೇಶನ್ ಕಾರ್ಡ ಮೂಲಕ ಸವಲತ್ತುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್ಗಳ ಮಾಹಿತಿಯನ್ನು ಗುರುತಿಸಿದ್ದು, ಇವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್ಗಳನ್ನು ತೆಗೆದುಹಾಕಲಾಗಿದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಮಾಹಿತಿ ಹಂಚಿಕೊಂಡಿದ್ದಾರೆ. ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲೇ ರದ್ದುಪಡಿಸಲಾದ ಪಡಿತರ ಚೀಟಿಯನ್ನು ಚೆಕ್ ಮಾಡಿಕೊಳ್ಳಬಹುದು.
Step-1: ಪ್ರಥಮದಲ್ಲಿ ಈ Ration card list ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ಈ ಪೇಜ್ ನಲ್ಲಿ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಿ ಇದಾ ದ ನಂತರ ಇಲ್ಲಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-3: “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ಪ್ರತಿ ತಿಂಗಳುವಾರು ನಿಮ್ಮ ತಾಲ್ಲೂಕಿನಲ್ಲಿ ರದ್ದುಪಡಿಸಲಾದ ರೇಶನ್ ಕಾರ್ಡ ಪಟ್ಟಿ ತೋರಿಸುತ್ತದೆ.
ಅರ್ಹರಿದ್ದರು ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು?
ಒಂದೊಮ್ಮೆ ಮೇಲಿನ ವಿಧಾನವನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಚೆಕ್ ಮಾಡಿದಾಗ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದು ನೀವು ಆಹಾರ ಇಲಾಖೆಯ ಮಾರ್ಗಸೂಚಿಯ ಪ್ರಕಾರ ರೇಶನ್ ಕಾರ್ಡ ಪಡೆಯಲು ಅರ್ಹರಿದ್ದರೆ ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಛೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿಯನ್ನು ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಿ.
ಇಂಟರ್ನ್ಶಿಪ್ ಯೋಜನೆಯು ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳಿಗೆ ನಿರ್ದಿಷ್ಟ ಉದ್ಯಮ ಅಥವಾ ಸಂಸ್ಥೆಯಲ್ಲಿ ಕೆಲಸದ ಅನುಭವವನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಸೈದ್ಧಾಂತಿಕ ಜ್ಞಾನವನ್ನು ಅನ್ವಯಿಸಲು, ಕೌಶಲ್ಯಗಳನ್ನು ಪಡೆಯಲು ಮತ್ತು ವೃತ್ತಿಪರ ನೆಟ್ವರ್ಕ್ಗಳನ್ನು ನಿರ್ಮಿಸಲು ಇಂಟರ್ನ್ಶಿಪ್ ಅವಕಾಶವನ್ನು ನೀಡುತ್ತದೆ.
ಇಂಟರ್ನ್ಶಿಪ್ ಯೋಜನೆಯ ಪ್ರಮುಖ ಗುಣಲಕ್ಷಣಗಳು:
ತಾತ್ಕಾಲಿಕ ಸ್ಥಾನ (ಸಾಮಾನ್ಯವಾಗಿ 3-12 ತಿಂಗಳುಗಳು)
ಪಾವತಿಸಿದ ಅಥವಾ ಪಾವತಿಸದ (ಸಂಸ್ಥೆಯನ್ನು ಅವಲಂಬಿಸಿ ಬದಲಾಗುತ್ತದೆ)
ಮೇಲ್ವಿಚಾರಣೆಯ ಕೆಲಸದ ಅನುಭವ
ಕಲಿಕೆಯ ಉದ್ದೇಶಗಳು ಮತ್ತು ಫಲಿತಾಂಶಗಳನ್ನು ವ್ಯಾಖ್ಯಾನಿಸಲಾಗಿದೆ
ಇಂಟರ್ನ್ಶಿಪ್ಗಾಗಿ ಹುಡುಕುವಾಗ, ಅಂತಹ ಅಂಶಗಳನ್ನು ಪರಿಗಣಿಸಿ:
ವೃತ್ತಿ ಗುರಿಗಳೊಂದಿಗೆ ಹೊಂದಾಣಿಕೆ
ಸಂಸ್ಥೆಯ ಸಂಸ್ಕೃತಿ
ಸ್ಥಳ
ಅವಧಿ
ಪರಿಹಾರ
ಇಂಟರ್ನ್ಶಿಪ್ ಯೋಜನೆಯಲ್ಲಿ ಭಾಗವಹಿಸುವ ಮೂಲಕ, ವ್ಯಕ್ತಿಗಳು ಅಮೂಲ್ಯವಾದ ಅನುಭವವನ್ನು ಪಡೆಯಬಹುದು, ಅವರ ವೃತ್ತಿಪರ ಪ್ರೊಫೈಲ್ ಅನ್ನು ನಿರ್ಮಿಸಬಹುದು ಮತ್ತು ಅವರ ವೃತ್ತಿ ಭವಿಷ್ಯವನ್ನು ಹೆಚ್ಚಿಸಬಹುದು.