ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಎಷ್ಟು ಜಮೆಯಾಗಿದೆ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಎಷ್ಟು ಜಮೆಯಾಗಿದೆ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌

 

ಕರ್ನಾಟಕ : ಅನ್ನಭಾಗ್ಯ ಯೋಜನೆಯ ಹಣ ಕೊನೆಗೂ ಬಂತು ಖಾತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ.

ಅನ್ನಭಾಗ್ಯ ಯೋಜನೆಯ ಮಾಹಿತಿ ನೀಡುವ ಆಹಾರ ಇಲಾಖೆ ವೆಬ್ಸೈಟ್

ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆ ನೀಡಿ ಫಲನುಭವಿಗಳ ಖಾತೆ ಹಣ ವರ್ಗಾವಣೆ ಮಾಡಿದರು. ಸದ್ಯ ಎರಡು ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು

ಇಲ್ಲಿದೆ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ನೀಡುವ ವೆಬ್ಸೈಟ್ ಲಿಂಕ್

https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿಪಡೆದುಕೊಳ್ಳಬಹುದು. ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ವರ್ಷ, ತಿಂಗಳು ಹಾಗೂ ಪಡಿತರ ಚೀಟಿಯ ಆರ್ಸಿ ಸಂಖ್ಯೆಯನ್ನು ನಮೂದು ಮಾಡಬೇಕು. ಆ ಬಳಿಕ ಗೋ ಎಂಬ ಆಯ್ಕೆಯನ್ನು ಮಾಡಿದರೆ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

ಅನ್ನಭಾಗ್ಯ ಹಣ ವರ್ಗಾವಣೆ ಕುರಿತು ಏನೆಲ್ಲಾ ಮಾಹಿತಿ ಲಭ್ಯ

ಅನ್ನಭಾಗ್ಯ ಹಣ ವರ್ಗಾವಣೆ ಖಚಿತ ಪಡೆಸಿಕೊಳ್ಳಲು ವೆಬ್ಸೈಟ್ ಪರಿಶೀಲಿಸಿದಾಗ ಅದರಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಕುಟುಂಬ ಸದಸ್ಯರು, ಪಡಿತರ ಚೀಟಿ ವಿಧಾನ, ಅಕ್ಕಿ ಅರ್ಹತೆ ಪ್ರಮಾಣ (ಇಂತಿಷ್ಟು ಕೆ.ಜಿ) ಹಾಗೂ ಹಣ ವರ್ಗಾವಣೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಮೊಬೈಲ್ ಸಂದೇಶ ಕೂಡ ಬರಲಿದೆ

ಅನ್ನಭಾಗ್ಯ ಯೋಜನೆಯ ಹಣವು ಕುಟುಂಬ ಮುಖ್ಯಸ್ಥರ ಖಾತೆಗೆ ಬರಲಿದೆ. ಒಂದು ಕೆಜಿ ಅಕ್ಕಿಗೆ 36 ರೂಪಾಯಿ ಅಂತೆ ತಲಾ ಐದು ಕೆಜಿ ಅಂತೆ ಕುಟುಂಬ ಸದಸ್ಯರ ಒಟ್ಟಾರೆ ಹಣವು ಖಾತೆಗೆ ಜಮೆಯಾಗಲಿದೆ. ಇನ್ನು ಹಣ ಜಮೆಯಾದ ಕೂಡಲೇ ಬ್ಯಾಂಕ್ನಿಂದ ಸಂದೇಶ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ 23 ಲಕ್ಷ ಫಲಾನುಭವಿಗಳಿಗೆ 34 ಕೋಟಿ ಹಣ ವರ್ಗಾವಣೆ

ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಅಂದಾಜು 6.6 ಲಕ್ಷ ಎಪಿಎಲ್, ಅಂತ್ಯೋದಯ ಕಾರ್ಡ್ಗಳ ಅಂದಾಜು 23 ಲಕ್ಷ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 34 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ತಿಳಿಸಿದರ.

 

ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಮೈಸೂರು ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ದೊರೆತಿದೆ. ಜಿಲ್ಲೆಯಲ್ಲಿ58432 ಅಂತ್ಯೋದಯ ಅನ್ನ ಯೋಜನೆ ಕಾರ್ಡ್ದಾರ ಕುಟುಂಬದ ಒಟ್ಟು 2,17,199 ಫಲಾನುಭವಿಗಳು, 6,61,290 ಬಿಪಿಎಲ್ ಕಾರ್ಡ್ಗಳ 20,83,627 ಜನರಿಗೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ವಿತರಿಸ ಬೇಕಿದೆ. ಅದರಂತೆ ಎಂದಿನಂತೆ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗಿದೆ. ಇನ್ನುಳಿದ ಐದು ಕೆಜಿ ಅಕ್ಕಿಗೆ ಬದಲಾಗಿ (1 ಕೆಜಿಗೆ 34 ರೂ. ನಂತೆ 5 ಕೆಜಿಗೆ ಹಣ) 170 ರೂ.ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿಒಟ್ಟು 7,11,722 ಕಾರ್ಡ್ಗಳ ಅಂದಾಜು 24 ಲಕ್ಷ ಮಂದಿ ನಗದು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

Leave a Comment

Your email address will not be published. Required fields are marked *

Scroll to Top