ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/-

ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/-

ದಯವಿಟ್ಟು ಈ ಸಂದೇಶವನ್ನು ಕೊನೆಯವರೆಗೂ ಗಮನವಿಟ್ಟು ಓದಿ. ಯಾವುದೇ ಗೊಂದಲ ಬೇಡ. ಈ ಸಂದೇಶವನ್ನು ಎಲ್ಲಾ ವಾಟ್ಸಪ್ ಗ್ರೂಪ್ ಗಳಿಗೆ ಕಳುಹಿಸಿ.

 *ಗೃಹ ಲಕ್ಷ್ಮೀ ಯೋಜನೆ* ಗೆ ಅರ್ಜಿ ಸಲ್ಲಿಸಲು ದಿನಾಂಕ 19/07/2023 ರಿಂದ ಚಾಲನೆ ದೊರೆಯಲಿದೆ. *ಗೃಹ ಲಕ್ಷ್ಮೀ ಯೋಜನೆ* ಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡಿ ನಂತರಾ ಕುಟುಂಬದ ಯಜಮಾನಿಯ ಆಧಾರ್ ಲಿಂಕ್ ಆದ ಮೊಬೈಲ್ ಗೆ ಯಾವ ದಿನಾಂಕ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ. ಆದುದರಿಂದ ಕುಟುಂಬದ ಯಜಮಾನಿಯ ಮೊಬೈಲ್ ರೀಚಾರ್ಜ್ ಮುಗಿದಿದ್ದರೆ ತಕ್ಷಣ ರೀಚಾರ್ಜ್ ಮಾಡಿಸಿ ಇಡಿ. ಮೊಬೈಲ್ ನಲ್ಲಿ ಮೆಸೇಜ್ ಪುಲ್ ಆಗಿದ್ದರೆ ಎಲ್ಲಾ ಮೆಸೇಜ್ ಡಿಲೀಟ್ ಮಾಡಿ ಇಡಿ. ಇಲ್ಲದಿದ್ದರೆ ಮೆಸೇಜ್ ಬರುವುದಿಲ್ಲ.

ಮೊಬೈಲ್ ನಲ್ಲಿ ಬಂದ ಮೆಸೇಜಿನಲ್ಲಿ ಹೇಳಿದ ದಿನದಂದು *ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರ* ಕ್ಕೆ ಹೋಗಿ ಅಥವಾ ಸರಕಾರ ನೇಮಿಸಿದ ಪ್ರಜಾಪ್ರತಿನಿಧಿ ಮೂಲಕ ಅರ್ಜಿ ಸಲ್ಲಿಸಬೇಕು. *ದಯವಿಟ್ಟು ಗಮನಿಸಿ ‌ ಬೇರೆ ಎಲ್ಲಿಯೂ ಅರ್ಜಿ ಸಲ್ಲಿಸಿದ್ದರೆ ಆ ಅರ್ಜಿ ತಿರಸ್ಕೃತ ಗೊಳ್ಳುತ್ತದೆ. ಒಮ್ಮೆ ಅರ್ಜಿ ರಿಜೆಕ್ಟ್ ಆದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಖಂಡಿತಾ ಇಲ್ಲ.* ದಯವಿಟ್ಟು ಯಾವುದೇ ತಪ್ಪು ಮಾಡಿ ಪಶ್ಚಾತ್ತಾಪ ಪಡಬೇಡಿ. ಅರ್ಜಿ ಸಲ್ಲಿಸಿದ ನಂತರ ಮಂಜೂರಾತಿ ಪತ್ರ ನೀಡಲಾಗುವುದು.

ಪ್ರಜಾಪ್ರತಿನಿಧಿ ಮೂಲಕ ಅರ್ಜಿ ಸಲ್ಲಿಸಿದ್ದರೆ ಅಂಚೆ ಮೂಲಕ ಅರ್ಜಿ ಮನೆಗೆ ತಲುಪಲಿದೆ. ಗೃಹ ಲಕ್ಷ್ಮೀ ಯೋಜನೆ ಗೆ ಅರ್ಜಿ ಸಲ್ಲಿಸಲು ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗಂಡನ ಆಧಾರ್ ಕಾರ್ಡ್ ( ಜೀವಂತ ಇದ್ದರೆ ಮಾತ್ರ) ತರಬೇಕು. ಕಡ್ಡಾಯವಾಗಿ ಮೆಸೇಜ್ ನಲ್ಲಿ ನಿಗದಿ ಪಡಿಸಿದ ದಿನಾಂಕದಂದೇ ಅರ್ಜಿ ಸಲ್ಲಿಸಬೇಕು.

ಒಂದು ವೇಳೆ ಆತ ದಿನ ಅರ್ಜಿ ಸಲ್ಲಿಸಲು ಸಾಧ್ಯ ಆಗದಿದ್ದರೆ ಮರುದಿನ ಸಂಜೆ 5 ಗಂಟೆಯಿಂದ 7 ಗಂಟೆಯ ಒಳಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ದಯವಿಟ್ಟು ಯಾವುದೇ ರೀತಿಯ ಗೊಂದಲ ಬೇಡ. ಈ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇತರರಿಗೂ ತಿಳಿಸಿ.

Leave a Comment

Your email address will not be published. Required fields are marked *

Scroll to Top