
ಸಿಇಟಿ-2025ಕ್ಕೆ ನೊಂದಣಿ ಹಾಗು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 16 ಮತ್ತು 17 ರಂದು ನಡೆಸುವುದಾಗಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಅದರಂತೆ, ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಆನ್ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನಾಂಕ ಎಂದಿತ್ತು.ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲಾಗುವ ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಆನ್ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು 24-02-2025 ರ ರಾತ್ರಿ 11.59 ರವರೆಗೆ ಹಾಗು 25-02-2025 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ.ವಿಶೇಷ ಸೂಚನೆ: “ಈಗಾಗಲೇ ಅರ್ಜಿ ಸಲ್ಲಿಸಿರುವವರು ಎಲ್ಲಾ ಮಾಹಿತಿ ಸರಿಯಾಗಿ ತುಂಬಿರುವ ಬಗ್ಗೆ ಪರಿಶೀಲಿಸಿಕೊಳ್ಳಿ, ತಪ್ಪಿದ್ದರೆ ಮತ್ತೊಮ್ಮೆ Login ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂತಿಮವಾಗಿ Submit ಮಾಡುವ ಅರ್ಜಿ ಸರ್ವರ್ನನಲ್ಲಿ Save ಆಗುತ್ತದೆ”.Date extended for registration and to apply online for CET-2025