ಮಣ್ಣೂ ಉಸಿರಾಡುತ್ತದೆಯೇ ? ಹೇಗೆ ? 2024

ಮಣ್ಣೂ ಉಸಿರಾಡುತ್ತದೆಯೇ ? ಹೇಗೆ ?

ಮಣ್ಣೂ ಉಸಿರಾಡುತ್ತದೆಯೇ ? ಹೇಗೆ ?

ಮರಳು ಮಣ್ಣಿನ ಕಣ ಕಣಗಳ ನಡುವೆ ಸ್ವಲ್ಪ ದೊಡ್ಡದು ಎನಿಸುವಂತಹ ರಂಧ್ರಗಳಿರುತ್ತವೆ. ಈ ರಂಧ್ರಗಳ ಮೂಲಕವೇ ನೀರು ಸುಲಭವಾಗಿ ಮಣ್ಣೊಳಗೆ ಇಳಿಯುತ್ತದೆ ಹಾಗೂ ಅಕ್ಕಪಕ್ಕ ಸರಾಗವಾಗಿ ಹರಿದಾಡುತ್ತದೆ.

ಆದರೆ ಮರಳು ಮಣ್ಣು ತನ್ನಲ್ಲಿರುವ ತೇವಾಂಶವನ್ನು / ನೀರನ್ನು ಕೆಲಕಾಲ ಹಿಡಿದಿಟ್ಟು ತನ್ನಲ್ಲಿ ಬೆಳೆಯುವ ಗಿಡಗಳಿಗೆ ಅಗತ್ಯ ಸಮಯದಲ್ಲಿ ನೀರು ಪೂರೈಸುವ ಸಾಮರ್ಥ್ಯ ಹೊಂದಿಲ್ಲ.ಜೇಡಿ ಮಣ್ಣಿನ ಕಣಕಣಗಳ ನಡುವೆಯೂ ಸಹ ರಂಧ್ರಗಳಿರುತ್ತವೆಯಾದರೂ, ಅವುಗಳ ಗಾತ್ರ ಬಹಳ ಚಿಕ್ಕದು. ಇದರಿಂದ ನೀರು ಸುಲಭವಾಗಿ ಮಣ್ಣೊಳಗೆ ಇಳಿಯಲಾಗದು. ನೀರು ಇಂಗಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗೆಯೇ ನೀರು ಅಕ್ಕಪಕ್ಕ ಹರಿದಾಡುವುದಕ್ಕೂ ಸಹ ಸ್ವಲ್ಪ ಸಮಯ ಬೇಕು.ನಮ್ಮಲ್ಲಿನ ಮಣ್ಣಗಳ ನಮೂನೆಯಲ್ಲಿ (soil texture).ಮರಳು ಮತ್ತು ಜೇಡಿ ಅಂಶಗಳ ಜೊತೆಗೆ ಗೋಡು ಮಣ್ಣಿನ ಪ್ರಮಾಣವೂ ಇರಬೇಕು.

ಈ ಮೂರು ಆಂಶಗಳಿರುವ ಮಣ್ಣಿದ್ದಲ್ಲಿ, ಸಮತೋಲನೆ ಇದೆಯೆಂದೇ ಅರ್ಥ.ಒಂದು ವೇಳೆ ನಮ್ಮಲ್ಲಿನ ಮಣ್ಣುಗಳಲ್ಲಿ ಮರಳು ಅಥವಾ ಗೋಡು ಅಥವಾ ಜೇಡಿ ಅಂಶಗಳ ಕೊರತೆಯಿದ್ದಲ್ಲಿ ಹಾಗೂ ಅವುಗಳು ಸಮತೋಲನೆಯಿಂದಿರಲು ಮಣ್ಣಿಗೆ ಸಾವಯವ ಅಂಶ ಬೆರೆಸುವುದು ನಮಗಿರುವ ಏಕೈಕ ಪರಿಹಾರ.ಮಣ್ಣಿಗೆ ಸಾವಯವ ಗೊಬ್ಬರವನ್ನು ಸೇರಿಸಿದಾಗ, ಮಣ್ಣುಜೀವಿಗಳ ಸಹಕಾರದಿಂದ ಮಣ್ಣಲ್ಲಿನ ಮರಳು – ಗೋಡು – ಜೇಡಿ ಅಂಶಗಳು ಪರಸ್ಪರ ಬೆರೆಯುತ್ತಾ ಸಮತೋಲನೆ ಯಲ್ಲಿರುತ್ತವೆ.

ಬೆರೆತಿರುವ ಮಣ್ಣು ಕಣಕಣಗಳ ನಡುವಿನ ರಂಧ್ರಗಳ ಮೂಲಕ ಮಣ್ಣು ಸರಾಗವಾಗಿ ಉಸಿರಾಡುತ್ತದೆ.ಖಟಾವಿನ ಸಮಯದಲ್ಲಿ ಗಿಡಗಳ ಬೇರುಗಳನ್ನು ಮಣ್ಣಲ್ಲೇ ಇರುವಂತೆ ಮಾಡಿದಾಗ, ಆ ಬೇರುಗಳು ಮಣ್ಣೊಳಗೆಲ್ಲಾ ಹರಡಿ, ಒಂದು ಬಗೆಯ ಅಂಟನ್ನು (sticky ‘glue’) ವಿಸರ್ಜಿಸಿ, ಅ ಆಂಟು ಮಣ್ಣು ಕಣಕಣಗಳು ಬೆರೆಯುವಂತೆ ಮಾಡುತ್ತವೆ.ಇನ್ನು ಬೇರು ಹರಡಿದ ಕಡೆಯೆಲ್ಲಾ ರಂಧ್ರಗಳು ಸೃಷ್ಟಿಯಾಗುತ್ತವೆ. ಕೊನೆಗೆ ಈ ಬೇರೂ ಸಹ ಮಣ್ಣಲ್ಲಿ ಮನೆಮಾಡಿಕೊಂಡಿರುವ ಮಣ್ಣು ಜೀವಾಣುಗಳಿಗೆ ಉತ್ತಮ ಆಹಾರವಾಗುತ್ತದೆ.ಉಳುಮೆ ಮಾಡುವುದು ಕಡಿಮೆಯಾದಷ್ಟೂ ಮಣ್ಣಿನ ರಚನೆ ಸುಧಾರಿಸುತ್ತದೆ. ಮಣ್ಣಲ್ಲಿನ ಜೀವಿಗಳು ಆತಂಕವಿಲ್ಲದೇ ಬದುಕುಳಿಯುವ ವಾತಾವರಣ ನಿರ್ಮಾಣವಾಗುತ್ತದೆ.ಅಂತಹ ಮಣ್ಣುಗಳು ಕ್ರಮೇಣ ಸಜೀವಿ ಮಣ್ಣುಗಳಾಗುತ್ತವೆ. ಸಜೀವಿ ಮಣ್ಣುಗಳು ಫಲವತ್ತಾಗಿರುತ್ತವೆ. ಫಲವತ್ತು ಮಣ್ಣಲ್ಲಿ ಬೆಳೆಯುವ ಬೆಳೆಗಳು ಇಳುವರಿಯಲ್ಲೂ ಗುಣಮಟ್ಟದಲ್ಲೂ ಹೆಚ್ಚೇ. ಅಲ್ಲವೇ . .

Leave a Comment